ದೊಡ್ಡಬಳ್ಳಾಪುರ ತಾಲ್ಲೂಕಿನ ಗ್ರಾಮಗಳಲ್ಲಿ ಹೀಗೀಗಾ ಭೂಕಳ್ಳಕಾಕರ ಕಾಟ ಜಾಸ್ತಿಯಾಗಿದೆ. ಹಳ್ಳಿಗಳಲಿ ಕಂಡು ಬರುವ ಗುಂಡು ತೋಪುಗಳು, ಗೋಕಟ್ಟೆಯನ್ನು ಒತ್ತುವರಿ ಮಾಡಿದ್ದಾರೆ. ಸರ್ಕಾರಿ ಜಾಗವೆಲ್ಲಾ ಭೂಗಳ್ಳರು ಕಬಳಿಕೆಯಾಗಿದ್ದು, ಕೆರೆಯಂಗಳಗಳ ಮೇಲೆ ಖದೀಮರ ಕಣ್ಣು ಬಿದ್ದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಕಸಾಘಟ್ಟ ಗ್ರಾಮದಲ್ಲಿ 150 ರಿಂದ 160 ಕುಟುಂಬಗಳಿದ್ದು, 200 ಕ್ಕೂ ಹೆಚ್ಚು ದನಕರುಗಳಿವೆ. ಈ ಹಳ್ಳಿಯ ಜನರು ಪಶುಸಾಕಾಣಿಕೆಯನ್ನು ನಂಬಿಕೊAಡು ಜೀವನ ನಡೆಸುತ್ತಿರುವ ಗ್ರಾಮದಲ್ಲಿ, ಜಾನುವಾರುಗಳಿಗೆ ಸಂವೃದ್ದವಾದ ಮೇವು ಗುಂಡುತೋಪು, ಕೆರೆಯಂಗಳದಲ್ಲಿ ಸಿಕ್ಕರೆ, ಜಾನುವಾರುಗಳಿಗೆ ಕುಡಿಯುವ ನೀರು ಗೋಕಟ್ಟೆಗಳಿಂದ ಸಿಗುತ್ತಿತ್ತು, ಈ ಹಳ್ಳಿಯಲ್ಲಿ ಸಂವೃದ್ದವಾದ ಮೇವು ಮತ್ತು ನೀರು ಸಿಗುತ್ತಿದ್ದರಿಂದ ಪಶುಸಂಗೋಪನೆ ಕಸಾಘಟ್ಟ ಗ್ರಾಮದ ರೈತರ ಪ್ರಮುಖ ಉದ್ಯೋಗವಾಗಿತ್ತು.

ಊರಿನ ಬಲಾಡ್ಯರೆನ್ನಿಸಿಕೊಂಡವರು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿದ್ದಾರೆ

ಗ್ರಾಮದದಲ್ಲಿ ಸರ್ಕಾರಿ ಗುಂಡುತೋಪಿನಲ್ಲಿ 4 ಎಕರೆ, ಗೋಮಾಳದಲ್ಲಿ 184 ಎಕರೆ, ಗೋಕಟ್ಟೆಯಲ್ಲಿ 3 ಎಕರೆ, ಕೆರೆಯಂಗಳ 62 ಎಕರೆ, ಸರ್ಕಾರಿ ತೋಪು 8 ಎಕರೆ ಇದೆ, ಗ್ರಾಮದ ಅಭಿವೃದ್ಧಿಗಾಗಿ ಸರ್ಕಾರಿ ಜಾಗ ಬಳಕೆಯಾಗ ಬೇಕಿತ್ತು ಆದರೆ ಗ್ರಾಮದ ಬಲಾಢ್ಯರು ಸರ್ಕಾರಿ ಜಾಗಗಳನ್ನ ಒತ್ತುವರಿ ಮಾಡಿಕೊಂಡು ಜಾನುವಾರುಗಳು ಮೇಯಲು ಜಾಗವಿಲ್ಲದಂತೆ ಮಾಡಿದ್ದಾರೆ ಎನ್ನಲಾಗಿದೆ.

ಕೆರೆಗೆ ಹೋಗುವ ದಾರಿಯನ್ನೇ ಕಬಳಿಸಿದ ಭೂಗಳ್ಳರು

ಕಸಾಘಟ್ಟ ಗ್ರಾಮದ ಸರ್ವೆ ನಂಬರ್36 ರಲ್ಲಿ 63 ಎಕರೆ ಕೆರೆ ಇದೆ, ಸದ್ಯ ಗ್ರಾಮದಲ್ಲಿನ ೨೦೦ಕ್ಕೂ ಹೆಚ್ಚು ಜಾನುವಾರುಗಳಿಗೆ ಕೆರೆಯಂಗಳ ಮೇವಿನ ತಾಣವಾಗಿದೆ. ಕೆರೆಯ ಅಂಚಿನಲ್ಲಿರುವ ರೈತರು ಕೆರೆಯಂಗಳವನ್ನ ಕ್ರಮೇಣವಾಗಿ ಒತ್ತುವರಿ ಮಾಡುತ್ತಿದ್ದಾರೆ, ಒತ್ತುವರಿ ಮಾಡಿದ ಜಾಗದಲ್ಲಿ ಆಡಿಕೆ, ಜೋಳ, ತರಕಾರಿಯನ್ನ ಬೆಳೆಯುತ್ತಿದ್ದಾರೆ, ಬೆಳೆಗಳ ರಕ್ಷಣೆಗಾಗಿ ಮುಳ್ಳಿನ ಬೆಲೆಯನ್ನ ಹಾಕಿದ್ದಾರೆ ಇದರಿಂದ ಕೆರೆಗೆ ಬರಲು ದಾರಿಯೇ ಇಲ್ಲದಂತಾಗಿದೆ, ಒತ್ತುವರಿ ಜಾಗದಲ್ಲಿ ಜಾನುವಾರುಗಳು ಹೋದಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾರೆ,

ತಹಶೀಲ್ದಾರ್ ನೀಡಿರುವ ನೋಟಿಸ್‌ಗೂ ಕ್ಯಾರೆ ಎನ್ನದ ಭೂಗಳ್ಳರು

ಗ್ರಾಮದ ಮುತ್ತುರಾಯಪ್ಪ ಎಂಬುವರು ಸರ್ವೆ ನಂಬರ್ 207 ರ ಗೋಕಟ್ಟೆಯನ್ನ ಒತ್ತುವರಿ ಮಾಡಿಕೊಂಡು ಮನೆಯನ್ನ ಕಟ್ಟಿದ್ದಾರೆ ಮತ್ತು ಸರ್ವೆ ನಂಬರ್ 36 ರ ಕೆರೆಯಂಗಳವನ್ನ ಒತ್ತುವರಿ ಮಾಡಿಕೊಂಡು ತೋಟವನ್ನಾಗಿ ಪರಿವರ್ತಿಸಿದ್ದಾರೆ, ಒತ್ತುವರಿ ಮಾಡಿರುವುದು ಧೃಢಪಟ್ಟಿತ್ತು, ಒತ್ತುವರಿ ತೆರವು ಮಾಡುವಂತೆ ತಹಶೀಲ್ದಾರ್ ಕಚೇರಿಯಿಂದ ನೋಟಿಸ್ ನೀಡಲಾಗಿದೆ, ಇದ್ಯಾವುದಕ್ಕೂ ಕೆರ್ ಮಾಡದ ಮುತ್ತುರಾಯಪ್ಪ ಕೆರೆಯಂಗಳವನ್ನ ದಿನೇ ದಿನೇ ಒತ್ತುವರಿ ಮಾಡಿಕೊಂಡು ತನ್ನ ಗ್ರಾಮಸ್ದರ ಮೇಲೆ ತನ್ನ ದರ್ಪ ತೋರಿಸುತ್ತಿದ್ದಾನೆ, ಕೆರೆಯಂಗಳದಲ್ಲಿ ಬೋರ್ ವೇಲ್ ಕೊರೆದು ತನ್ನ ತೋಟಕ್ಕೆ ನೀರಿನ ಸೌಲಭ್ಯ ಕಲ್ಪಿಸಿದ್ದಾನೆ, ಈ ಬಗ್ಗೆ ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ ಧಮ್ಕಿ ಹಾಕಿ ಬೆದರಿಸುತ್ತಾನೆಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.

By Shisha

Leave a Reply

Your email address will not be published.