ಬಾಗಲಕೋಟೆ : ಆಗಸ್ಟ 03 (ಕರ್ನಾಟಕ ವಾರ್ತೆ) : ರಾಜ್ಯದ ಗಡಿ ಭಾಗಗಳಲ್ಲಿ ಮತ್ತು ಕೆಲವು ಪ್ರದೇಶಗಳಲ್ಲಿ ಕೋವಿಡ್-19 ಪುನರುತ್ಥಾನದ ಹಿನ್ನಲೆಯಲ್ಲಿ ಸೂಕ್ತ ಮುನ್ನಚ್ಚರಿಕೆ ಕ್ರಮಕೈಗೊಳ್ಳಲು ಜಿಲ್ಲೆಯಾದ್ಯಂತ ಕೆಲವೊಂದು ನಿರ್ಬಂದಗಳನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
  ಮದುವೆ ಸಮಾರಂಭ, ಇತರೆ ಕೌಟುಂಬಿಕ ಕಾರ್ಯಗಳಿಗೆ 100 ಜನಕ್ಕೆ ಮಾತ್ರ ಸೀಮಿತಗೊಳಿಸಲಾಗಿದ್ದು, ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸತಕ್ಕದ್ದು. ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ನೀಡಿದ್ದು, ಇತರೆ ಎಲ್ಲ ಸೇವೆಗಳನ್ನು ನಿರ್ಬಂಧಿಸಲಾಗಿದೆ. ಕೋವಿಡ್ ಸೂಕ್ತ ನಡುವಳಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದಕ್ಕೆ ವಾಕಿಂಗ್ ಮತ್ತು ಜಾಗಿಂಗ್ ಉದ್ದೇಶಕ್ಕಾಗಿ ಉದ್ಯಾನವನಗಳನ್ನು ಬೆಳಿಗ್ಗೆ 7 ರಿಂದ ಸಂಜೆ 6 ವರೆಗೆ ಮಾತ್ರ ತೆರೆಯಲು ಅನುಮತಿಸಿದ್ದು, ಗುಂಪು ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
  ಮರಣ, ಅಂತ್ಯಕ್ರಿಯೆ ಮತ್ತು ಶವ ಸಂಸ್ಕಾರಗಳಿಗೆ ಕೇವಲ 20 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಆಗಮಿಸುವ ವ್ಯಕ್ತಿಗಳ ಲಸಿಕಾ ಸ್ಥಿತಿಯನ್ನು ಪರಿಗಣಿಸದೇ 72 ಗಂಟೆಯೊಳಗಿನ ಕೋವಿಡ್-19 ನೆಗಟಿವ್ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು. ವಿಮಾನಯಾನ, ರೈಲ್ವೆ ಮತ್ತು ರಸ್ತೆ ಸಾರಿಗೆ ಅಧಿಕಾರಿಗಳು, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಜಿಲ್ಲೆಗೆ ಪ್ರಯಾಣಿಸುವ ಪ್ರಯಾಣಿಕರ ಲಸಿಕಾ ಸ್ಥಿತಿಯನ್ನು ಪರಿಗಣಿಸದೇ 72 ಗಂಟೆಯೊಳಗಿನ ಕೋವಿಡ್-19 ನೆಗಟಿವ್ ಪ್ರಮಾಣ ಪತ್ರವನ್ನು ಖಚಿತಪಡಿಸಿಕೊಳ್ಳತಕ್ಕದ್ದು.
  ಇದರ ಜೊತೆಗೆ ಟೆಸ್ಟ್, ಟ್ರೀಟ್, ಟ್ರ್ಯಾಕ್ ಮತ್ತು ವ್ಯಾಕ್ಸಿನೇಶನ್‍ಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮತ್ತು ಕೋವಿಡ್ ಸೂಕ್ತ ನಡುವಳಿಕೆಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಸೂಕ್ಷ್ಮ ಮಟ್ಟದಲ್ಲಿ ನಿಯಂತ್ರಣ, ಕಣ್ಗಾವಲು ಮತ್ತು ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ಛಾಯಾಚಿತ್ರ ಲಗತ್ತಿಸಿದೆ. 1

ಕಂದಗಲ್ಲ ಕೇಂದ್ರ : 5 ರಂದು ವಿದ್ಯುತ್ ವ್ಯತ್ಯಯ

ಬಾಗಲಕೋಟೆ : ಆಗಸ್ಟ 03 (ಕರ್ನಾಟಕ ವಾರ್ತೆ) : ಹುನಗುಂದ ತಾಲೂಕಿನ ಕಂದಗಲ್ಲ 33/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕೈಗೊಳ್ಳುವ ಪ್ರಯುಕ್ತ ಆಗಸ್ಟ 5 ರಂದು ಬೆಳಿಗ್ಗೆ 10 ರಿಂದ ಸಂಜೆ 5 ವರೆಗೆ ಕಂದಗಲ್ಲ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಕಂದಗಲ್ಲ, ಮರಟಗೇರಿ, ಸೋಮಲಾಪೂರ, ಗೋನಾಳ ಎಸ್.ಟಿ, ಕೃಷ್ಣಾಪೂರ, ಹಿರೇಓತಗೇರಿ, ಚಿಕ್ಕಓತಗೇರಿ, ವಜ್ಜಲ, ಕಲ್ಲಗನಾಳ, ಶಿವನಶಕ್ತಿ, ಚಿಕ್ಕಶಿವನಗುತ್ತಿ ಗ್ರಾಮಗಳಲ್ಲಿ ಹಾಗೂ ಐಪಿ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದ್ದು, ಗ್ರಾಹಕರು ಸಹಕರಿಸುವಂತೆ ಬಾಗಲಕೋಟೆ ಹೆಸ್ಕಾಂ ಕಾರ್ಯನಿರ್ವಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಹೊಸ ನ್ಯಾಯಬೆಲೆ ಅಂಗಡಿ ಮಂಜೂರಿಗೆ ಅರ್ಜಿ

ಬಾಗಲಕೋಟೆ : ಆಗಸ್ಟ 03 (ಕರ್ನಾಟಕ ವಾರ್ತೆ) : ಜಿಲ್ಲೆಯ ಜಮಖಂಡಿ ನಗರದ ವಾರ್ಡ ನಂ.29 ಮತ್ತು ವಾರ್ಡ ನಂ.31ಕ್ಕೆ ತಲಾ ಒಂದು, ಟಕ್ಕಳಕಿ ಹಾಗೂ ಟಕ್ಕೊಳ ಗ್ರಾಮಗಳು ಸೇರಿ ಒಂದು, ಕನ್ನೊಳ್ಳಿ ಹಾಗೂ ಮುಧೋಳ ತಾಲೂಕಿನ ಮಾಲಾಪೂರ ಗ್ರಾಮಕ್ಕೆ ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿ ನೀಡುವ ಸಲುವಾಗಿ ಅರ್ಹ ಸಂಘ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
  ಅರ್ಜಿಗಳನ್ನು ರಾಜ್ಯ ಸರಕಾರದ ಸ್ವಾಮ್ಯದ ನಿಗಮಗಳು, ಕಂಪನಿಗಳು ಅಥವಾ ಗ್ರಾಮ ಪಂಚಾಯತಿ, ನಗರ ಸ್ಥಳೀಯ ಸಂಸ್ಥೆಗಳು, ಸಂಘಗಳು, ವೈಯಕ್ತಿಕ, ಸಹಕಾರ ಸಂಘಗಳು ಅರ್ಜಿ ಸಲ್ಲಿಸಬಹುದಾಗಿದೆ. ಜಮಖಂಡಿ ತಾಲೂಕಿನಲ್ಲಿ ಬರುವ ಹೊಸ ನ್ಯಾಯಬೆಲೆ ಅಂಗಡಿ ಮಂgಜೂರಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನ ಆಗಸ್ಟ 29 ಆದರೆ, ಮುಧೋಳ ತಾಲೂಕಿನ ಮಾಲಾಪೂರ ಗ್ರಾಮ ನ್ಯಾಯಬೆಲೆ ಅಂಗಡಿಗೆ ಅರ್ಜಿ ಸಲ್ಲಿಸಲು ಆಗಸ್ಟ 31 ಕೊನೆಯದಿನವಾಗಿರುತ್ತದೆ.
  ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ತಹಶೀಲ್ದಾರ ಹಾಗೂ ಆಹಾರ ಇಲಾಖೆಯ ಜಂಟಿ ನಿರ್ದೇಶಕರು ಕಚೇರಿಯಿಂದ ಪಡೆದುಕೊಳ್ಳುವಂತೆ ಆಹಾರ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ರೀಡಾಕಿಟ್ ವಿತರಣೆಗೆ ಅರ್ಜಿ

ಬಾಗಲಕೋಟೆ : ಆಗಸ್ಟ 03 (ಕರ್ನಾಟಕ ವಾರ್ತೆ) : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಲ್ಲೆಗೆ ಸರಬರಾದಾ ಕ್ರೀಡಾಗಂಟನ್ನು ವಿತರಿಸಲು ಅರ್ಹ ಎಸ್‍ಸಿ, ಎಸ್‍ಟಿ ಸಂಘ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
  ಅರ್ಜಿಗಳನ್ನು ಶೈಕ್ಷಣಿಕ ಕ್ರೀಡಾ ಸಾಂಸ್ಕøತಿಕ ಹಾಗೂ ಸಮುದಾಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಎಸ್‍ಸಿ, ಎಸ್‍ಟಿ ವರ್ಗದ 18 ರಿಂದ 35 ವರ್ಷ ವಯೋಮಿತಿಯ ಯುವಜನರು ಕಾನೂನು ಬದ್ದವಾಗಿ ಕರ್ನಾಟಕ ಸಂಘ ಸಂಸ್ಥೆಗಳ ನೋಂದಾವಣೆ ಕಾಯಿದೆ 1960 ರಡಿಯಲ್ಲಿ ಜಿಲ್ಲಾ ಸಹಕಾರ ಇಲಾಖೆಯಲ್ಲಿ ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ ನೊಂದಾಯಿಸಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನೋಂದಣಿ ಪ್ರಮಾಣ ಪತ್ರ ಪಡೆದ ಸಂಘ ಸಂಸ್ಥೆಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
  ಅರ್ಹ ಸಂಘ ಸಂಸ್ಥೆಗಳು ಆಗಸ್ಟ 16 ರೊಳಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬಾಗಲಕೋಟೆ ಇವರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂಸಂ.08354-235896 ಮತ್ತು ಮೊನಂ.9008338138ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

By Shisha

Leave a Reply

Your email address will not be published. Required fields are marked *